Tapta Mudraadharana and Utthana dwadshi pooja by Sri Mantralay Mutt.

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಾರ್ತೀಕ ಶುದ್ಧ ಏಕಾದಶಿಯಂದು ಸುದರ್ಶನ ಹೋಮ ನಡೆಸಲಾಯಿತು. ಚಾತುರ್ಮಾಸ್ಯದ ಕೊನೆಯ ದಿನವಾದ ಇಂದು ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಸುಯತೀಂದ್ರ ತೀರ್ಥರು ಕೊನೆಯ ಏಕಾದಶಿ ಪ್ರಯುಕ್ತ ಶ್ರೀ ಮಠದ ಶಿಷ್ಯರಿಗೆ ತಪ್ತಮುದ್ರಾಧಾರಣೆ ಮಾಡಿದರು. ನಂತರ ಗುರುಗಳು ತಡರಾತ್ರಿ ತನಕವೂ ಆಂಧ್ರ, ಕರ್ನಾಟಕ, ತಮಿಳ್ನಾಡು, ಮುಂಬೈ ಮುಂತಾದ ಕಡೆಗಳಿಂದ ಬಂದ ಸಾವಿರಾರು ಜನರಿಗೆ ತಪ್ತಮುದ್ರಾಧಾರಣೆ ಮಾಡಿದರು.
ಉತ್ಥಾನದ್ವಾದಶಿ-
ಕಾರ್ತೀಕ ಮಾಸದಲ್ಲಿ ಈ ದಿನ ಬಹಳ ವಿಶೇಷವಾದದ್ದು. ರಾಧಾ-ಕಾರ್ತೀಕ ಅಥವಾ ತುಳಸಿ ದಾಮೋದರ ವಿವಾಹವು ವೈಭವದಿಂದ ನಡೆಸಲಾಗುತ್ತದೆ. ಇನ್ನೊಂದು ವಿಶೇಷವೆಂದರೆ ಬಹಳ ಹಿಂದಕ್ಕೆ ಶ್ರೀ ಮನ್ ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ನರಹರಿತೀರ್ಥರು ಕಳಿಂಗ ದೇಶದ ಮಹಾರಾಜನ ಖಜಾನೆಯಲ್ಲಿ ಸೇರಿಹೋಗಿದ್ದ ಶ್ರೀಮೂಲರಾಮನ ಪ್ರತಿಮೆಯನ್ನು  ಪುನಃ ಶ್ರೀಮಠಕ್ಕೆ ತಂದು ಕೊಟ್ಟ ದಿನ ಇದೇ ಉತ್ಥಾನದ್ವಾದಶಿಯಂದು.
ಶ್ರೀಮಠದ ಸಂಸ್ಥಾನಾಧಿಪತಿಗಳಾದ ಶ್ರೀ ಸುಯತೀಂದ್ರತೀರ್ಥರ ಸನ್ನಿಧಿಯಲ್ಲಿ ತುಳಸಿಪೂಜೆ ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಂತ್ರಾಲಯದ ಸಮಸ್ತ ಗ್ರಾಮಸ್ಥರು ಹಾಗೂ ಯಾತ್ರಿಕರು ಹಾಗೂ ಶ್ರೀ ಮಠದ ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು. ಪೂಜೆಯನ್ನು ಮುಗಿಸಿ ಶ್ರೀಗಳು ನೆರೆದ ಸಾವಿರಾರು ಭಕ್ತರಿಗೆ ಫಲಮಂತ್ರಾಕ್ಷತೆಯನ್ನು ಕೊಟ್ಟು ಅನುಗ್ರಹಿಸಿದರು.
 ಎರಡೂ ದಿನದ ಚಿತ್ರಗಳು ಇಲ್ಲಿವೆ, ನೋಡಿ ಆನಂದಿಸಿ.