Guru bhkti Utsava 5th day Awards.

Gurubhakti utsava

ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯದಲ್ಲಿ  ಶ್ರೀ ಗುರುಸಾರ್ವಭೌಮರ ಪಟ್ಟಾಭಿಷೇಕ ಹಾಗೂ ವರ್ಧಂತ್ಯುತ್ಸವದ ನಿಮಿತ್ತ ೭ ದಿನಗಳ ಕಾಲ ನಡೆಯುತ್ತಿರುವ ಗುರು ಭಕ್ತಿ ಉತ್ಸವ ಎನ್ನುವ ಜ್ಞಾನಸತ್ರ ಅರ್ಥವತ್ತಾಗಿ ನಡೆದಿದೆ. ಪ್ರತಿ ದಿನವೂ ನಾನಾ ಕಡೆಯಿಂದ ಬಂದಿರುವ ಭಜನಾಮಂಡಳಿಗಳಿಂದ ಭಗವನ್ನಾಮ ಸಂಕೀರ್ತನೆ, ಗ್ರಾಮಪ್ರದಕ್ಷಿಣೆ,  ವಿದ್ವಾಂಸರಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆಯ ಪ್ರವಚನ, ಪಂಡಿತರುಗಳಿಂದ ಅವರು ರಚಿಸಿದ ಗ್ರಂಥಗಳ ಅನುವಾದ, ವಿದ್ವತ್ ಗೋಷ್ಠಿ,  ಮಹಿಳಾ ಭಜನಾ ಮಂಡಳಿಗಳಿಂದ ದಾಸರು ರಚಿಸಿದ ರಾಯರ ಭಜನೆಗಳು ಹೀಗೆ ನವವಿಧಭಕುತಿಯ ಎಲ್ಲಾ ಅಂಶಗಳಿಂದಲೂ ಭಗವಂತನ, ರಾಯರ ಸೇವೆ.  ಒಟ್ಟಿನಲ್ಲಿ " ಗುರು ಭಕ್ತಿ ಉತ್ಸವ" ಹೆಸರಿನ ಅನ್ವರ್ಥಕತೆಯನ್ನು ಸಾರ್ಥಕಗೊಳಿಸಿದ್ದಾರೆ. ಶ್ರೀ ಶ್ರೀಪಾದಂಗಳವರು ಎಲ್ಲ ಕಡೆಯಲ್ಲಿಯೂ ಓಡಾಡಿಕೊಂಡು ರಾಯರ ಭಕುತರ ಭಕುತಿಯನ್ನು ಕಂಡು ಪುಳಕಿತಗೊಂಡಿದ್ದಾರೆ. ಸೇವೆ ಮಾಡುವರಲ್ಲಿ ಉತ್ಸಾಹ ತುಂಬಿದ್ದಾರೆ.

ಉತ್ಸವದ ೫ನೆಯ ದಿನದಂದು  ಬೆಳಗ್ಗೆ  ರಾಣೆಬೆನ್ನೂರಿನಿಂದ ಬಂದ ಮಹಿಳಾ ಭಜನಾ ಮಂಡಳಿ ಹಾಗೂ ಸ್ಥಳೀಯ ಭಜನಾ ಮಂಡಳಿಗಳಿಂದ  ಗ್ರಾಮ ಪ್ರದಕ್ಷಿಣೆ, ಮಾನಕರಿ ಶ್ರೀನಿವಾಸಾಚಾರ್ಯರ ಶ್ರೀ ರಾಘವೇಂದ್ರ ವಿಜಯ ಪ್ರವಚನದ ನಂತರ ವಿದ್ಯಾಪೀಠದ ವಿದ್ಯಾರ್ಧಿ ಚಿ.ಪ್ರದೀಪನಿಂದ ರಾಯರು ರಚಿಸಿದ ದಶಾವತಾರ ಸ್ತುತಿ ವಿಶ್ಲೇಷಣೆ ಹಾಗೂ ವಿ.ಆರ್. ಪಂಚಮುಖಿ  ಅವರ ಪ್ರವಚನವಿತ್ತು. ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಭಜನಾ ಮಂಡಳಿಗಳಿಂದ ಭಗವನ್ನಾಮ ಸಂಕೀರ್ತನೆಯೊಂದಿಗೆ ಕೋಲಾಟ, ನರ್ತನ ಸೇವೆ ನಡೆಸಿದರು.

ಇಂದಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಸೂರಿನ  ಗಣಪತಿ ಸಚ್ಚಿದಾನಂದ ಗುರುಕುಲಕ್ಕೆ  "ಗುರುಕುಲ ಪೋಷಿಣಿ ಪ್ರಶಸ್ತಿ ನೀಡಲಾಯಿತು.  ಘನಪಾಠಿ ಹರಿವೀರಭದ್ರ ಶರ್ಮ ಇವರು ಶ್ರೀಗಳ ಕೈಯಿಂದ ಪ್ರಶಸ್ತಿ ಹಾಗೂ ಫಲಮಂತ್ರಾಕ್ಷತೆ ಸ್ವೀಕರಿಸಿದರು. ಅನಂತಪುರ ಜಿಲ್ಲೆಯ ಕದ್ರಿ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಅರ್ಚಕರಾದ ಶ್ರೀ ಏ.ವಿ. ನರಸಿಂಹಾಚಾರುಲು(ವಸಂತಾಚಾರುಲು) ಇವರಿಗೆ ಮತ್ತು ಅನಂತಪುರದ ಸಮೀಪ ಇರುವ ಮತ್ತೊಂದು ಪೆನ್ನೋಬಲ( ಪೆನ್ನಹೋಬಲ) ಲಕ್ಷ್ಮೀ ದೇವಸ್ಥಾನದ ಅರ್ಚಕರಿಗೆ ಅರ್ಚಕ ಅಭಿನಂದನಾ ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿ ಪ್ರದಾನದ ನಂತರ ದಾಸವಾಣಿ ಕಾರ್ಯಕ್ರಮದಲ್ಲಿ ಶ್ರೀ ವೇಮೂರಿ ಶ್ರೀನಿವಾಸ ಶರ್ಮ ಇವರ ಸಂಗೀತ ಕಾರ್ಯಕ್ರಮವಿತ್ತು. ಸಂಗೀತಗಾರರಿಗೆ ಶ್ರೀ ಸುಯತೀಂದ್ರ ತೀರ್ಥ ಶ್ರೀ ಪಾದಂಗಳವರು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

 

 

 

 

 

 

      Click here for more Images