Mahime of Sri Purandara Dasaru - Kannada

ಮನ್ಮನೋಭಿಷ್ಟವರದಂ ಸರ್ವಾಭೀಷ್ಠಫಲಪ್ರದಮ್ |
ಪುರಂದರಗುರೂನ್ ವಂದೇ ದಾಸಶ್ರೇಷ್ಠಂ ದಯಾನಿಧಿಮ್ ||


ಅಪರೋಕ್ಷಿಕೃತರಾದ,ಜ್ಞಾನಶ್ರೇಷ್ಠರಾದ,ವೈರಾಗ್ಯ ಶಿಖಾಮಣಿಗಳಾದ ಪುರಂದರದಾಸರು ಹರಿದಾಸಾಗ್ರೇಸರರು. ನಾರದಾಂಶರಾದ ಇವರ ಸಾಹಿತ್ಯ ಸಮಾಜಕ್ಕೆ ದೊಡ್ಡ ಕೊಡುಗೆ.ಭಗವತ್ ಪರ ಭಕ್ತಿ ಸಾಧನೆಗೆ ಇವರ ಸಾಹಿತ್ಯವೇ ಮೆಟ್ಟಿಲು.ಒಂದು ರೀತಿಯಲ್ಲಿ ಈ ಸಾಹಿತ್ಯ,ಇವರ ನುಡಿ ಇಲ್ಲದೆ ಭಕ್ತನೊಬ್ಬನಿಗೆ ಭಗವಂತನ ಬಳಿ ಏನು ಪ್ರಾರ್ಥಿಸಬೇಕೆಂದೂ ತಿಳಿಯದು ಅಂದರೆ ಅತಿಶಯೋಕ್ತಿಯಲ್ಲ.ಭಕ್ತ ಜನರಲ್ಲಿಅತ್ಯಂತ ಕಾರುಣ್ಯ ತೋರಿದ ದಾಸರು,ಸಾಮಾನ್ಯ ಜನರನ್ನು ಭಕ್ತಿ ಮಾರ್ಗದಿ ತೊಡಗಿಸಿ ಭಗವಂತನನ್ನು ಗಾಯನದ  ಮೂಲಕಕೊಂಡಾಡುವ ದಾರಿಗೆ ಕರೆತರುವ ಉತ್ತಮ ಕಾರ್ಯ ಮಾಡಿದ್ದಾರೆ.ದೀನ ಜನರ ಉದ್ಧಾರವೇ ತಮ್ಮ ಅವತಾರದ ಉದ್ದೇಶ ಎಂದು ನಿರೂಪಿಸಿದ್ದಾರೆ.ಅವರ ವಿಚಾರ,ಅವರ ಪವಾಡ,ಸಾಹಿತ್ಯಗಳ ಬಗ್ಗೆ ಬರೆಯುವುದು ಅಲ್ಪರಿಂದ ಅಸಾದ್ಯವಾದರೂ ಅವರ ಆರಾಧನೆಯಅಂಗವಾಗಿ ಒಂದು ಮಹಿಮೆ ಹೇಳಿದರೆ ಅಳಿಲು ಸೇವೆಯಂತೆ.

ವಿಜಯದಾಸರು ತಮ್ಮ ಹಿಂದಿನ ಜನ್ಮದಲ್ಲಿ ಮಧ್ವಪತಿಯಾಗಿ ಪುರಂದರ ದಾಸರಲ್ಲಿ ಅವರ ಮಗನಾಗಿ ಜನಿಸಿದ್ದರು.ಅವರೇ ತಮ್ಮಶಿಷ್ಯರಿಗೆ ತಮ್ಮ ಹಿಂದಿನ ತಂದೆಯಾದ ಪುರಂದರ ದಾಸರ ಮಹಿಮೆಯನ್ನು ಹೇಳುತ್ತಾ ತಮ್ಮ ಯಾತ್ರೆ ಮುಂದುವರೆಸುತ್ತಾರೆ.ಅದರಿಂದ ಆಯ್ದ ಒಂದು ಮಹಿಮೆ.
"ವಿಜಯದಾಸರು ತಿರುಪತಿ ಯಾತ್ರೆ ಮುಗಿಸಿ ಶ್ರೀಶೈಲದ ಕಡೆ ಸಾಗಿದ್ದಾರೆ.ಅಹೋಬಲ ನೃಸಿಂಹನ ಕೃಪೆಯನ್ನು ಸಂಪಾದಿಸಿ ಮುಂದೆ ಸಾಗಿದ ಅವರು ಅರಣ್ಯ ಮಾರ್ಗದಿಂದ ಶ್ರೀಶೈಲಕ್ಕೆ ತಲುಪಬೇಕು.ತಮ್ಮ ಜೊತೆಯಲ್ಲಿದ್ದವರಿಗೆ ಧೈರ್ಯ ಹೇಳುತ್ತಾ ಪುರಂದರ ದಾಸರು ಈ ಮಾರ್ಗದಲ್ಲಿ ಸಂಚರಿಸಿದಾಗ ನಡೆದ ಘಟನೆ ವಿವರಿಸುತ್ತಾರೆ.ಪುರಂದರ ದಾಸರು ತಮ್ಮ ಭಕ್ತರೊಡನೆ ಸಂಚಾರ ಮಾಡುತ್ತಿದ್ದಾಗ ದೊಡ್ಡ ಹುಲಿಯೊಂದು ಆರ್ಭಟಿಸುತಾ  ಬಂದು ಎದುರು ನಿಲ್ಲುತ್ತದೆ.ಸ್ವಲ್ಪವೂ ಎದೆಗುಂದದೆ ತಮ್ಮ ಜೊತೆಯಲ್ಲಿದ್ದವರಿಗೆ ಧೈರ್ಯ ಹೇಳಿಅಹೋಬಲ ನೃಸಿಂಹನನ್ನು ಸ್ತುತಿಸುತ್ತಾರೆ.ಒಂದು ಹೆಜ್ಜೆ ಕೂಡಾ ಮುಂದೆ ಬರಲಿಲ್ಲ ಆ ಹುಲಿ.ಐದ್ಹತ್ತು ನಿಮಿಷದೊಳಗೆ ಧನುಷ್ಟಂಕಾರದ ಶಬ್ದ ಕೇಳಿಸಿತು. ಸತ್ತು ಬಿತ್ತು ಹುಲಿ. ಬೆರಗಾಗಿ ದಾಸರು ಸುತ್ತಮುತ್ತ ನೋಡಿದಾಗ ಶ್ರೀ ಪುರಂದರ ವಿಠಲನು ಬಿಲ್ಗಾರ ರೂಪದಿಂದ ಶ್ರೀ ದಾಸರಾಯರಿಗೆ ದರ್ಶನವಿತ್ತು ಭಕ್ತ ಸಂರಕ್ಷಣ ಧುರೀಣತೆಯನ್ನು ವ್ಯಕ್ತಮಾಡುತ್ತಾನೆ.ಈ ಅನುಭವ ಮತ್ತೆ ವಿಜಯದಾಸರಿಗೆ ಉಂಟಾಗುತ್ತದೆ.

ಅವರ ಎದುರೇ ಒಂದು ದೊಡ್ಡ ಹುಲಿ ನಿಂತಿತು.ಜೊತೆಯಲ್ಲಿದ್ದವರೆಲ್ಲಾ ಚೀರಾಡಿದರೂ ದಾಸರು ಮಾತ್ರ ಎದೆಗುಂದz  ಅದರ ಎದುರು ನಿಂತು ದಿಟ್ಟಿಸಿ ನೋಡುತ್ತಾರೆ.ಅಪರೋಕ್ಷಿಗಳಾದ ದಾಸರಿಗೆ ಆ ಹುಲಿಯ ಸ್ವರೂಪ ತಿಳಿದಿದ್ದರಿಂದ ಜೊತೆಯಲ್ಲಿದ್ದವರಿಗೆ ಧೈರ್ಯ ಹೇಳಿ ಇದು ಪ್ರಾರಬ್ಧ ಕರ್ಮದಿಂದ ಕ್ರೂರಮೃಗವಾಗಿ,ಇದರಿಂದ ಬಿಡುಗಡೆ ಬಯಸಿ ನಮ್ಮ ಮುಂದೆ ನಿಂತಿದೆ.ಇದೊಂದು ಸುಜೀವಿ.ವೇಣುಗೋಪಾಲನ ಭಕ್ತ. ನೋಡಿ ಅದರ ಕಣ್ಣಲ್ಲಿ ನೀರು ಎಂದು ಹೇಳಿ ಅಹೋಬಲನನ್ನು ಮೊರೆಯಿಟ್ಟು ಸ್ತುತಿಸುತ್ತೇನೆ.ನರಸಿಂಹಾಭಿನ್ನ ವಿಜಯವಿಠಲ ಈ ಜನ್ಮದಿಂದ ಆ ಹುಲಿಗೆ ಬಿಡುಗಡೆ ನೀಡಲಿ ಎಂದು ತಮ್ಮ ದೇವರ ಪೆಟ್ಟಿಗೆಯನ್ನು ಶುದ್ಧವಾದ ಸ್ಥಳದಲ್ಲಿ ಇಟ್ಟು ಆ ಹುಲಿಗಾಗಿ ಪ್ರಾರ್ಥಿಸಿ ಒಂದು ಕೃತಿಯನ್ನೇ ರಚಿಸುತ್ತಾರೆ.ಕಣ್ತುಂಬ ನೀರು ತುಂಬಿದ ಹುಲಿ ಆ ಪೆಟ್ಟಿಗೆಗೆ ಪ್ರದಕ್ಷಿಣೆ ಬಂದು ದಿಟ್ಟಿಸಿ ನೋಡಿ ಅಲ್ಲೇ ಬಿದ್ದು ಪ್ರಾಣ ಬಿಡುತ್ತದೆ.
ಪುರಂದರ ದಾಸರಿಂದ ಅನುಗೃಹೀತರಾದ ವಿಜಯದಾಸರೇ ಎಷ್ಟು ಪವಾಡಗಳಿಂದ ಭಕ್ತರನ್ನು ಉದ್ಧರಿಸಿದ್ದಾರೆಂದ ಮೇಲೆ ಅವರ ಪೂರ್ವಜನ್ಮದ ತಂದೆಗಳಾದ,ಈ ಜನ್ಮದ ಸ್ವರೂಪೋದ್ಧಾರಕ ಗುರುಗಳಾದ ಪುರಂದರದಾಸರ ಮಹಿಮಾ ಎಂತಹುದು ಭಗವದ್ಭಕ್ತರು ತಿಳಿಯಬೇಕು.ಸಂಗೀತ ಪಿತಾಮಹನೆನಿಸಿದ ದಾಸರು ಸಂಗೀತ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.೪,೭೫,೦೦೦ ಕೃತಿಗಳನ್ನು ನೀಡಿದ ಇವರ ಅಪೂರ್ವ ಸಂಗ್ರಹ ಪುರಂದರೋಪನಿಷತ್ ಎಂದೇ ವ್ಯಾಸರಾಯರಿಂದ ಸನ್ಮಾನಿತವಾಯ್ತು.
ಘೋರನರಕದಲ್ಲಿ ಬಿದ್ದ ಅಪಾರ ಜನರು|ಚೀರುತಿರಲುದ್ಧಾರ
ಮಾಡಿದ ನಾರದರಿವರು | ಅವತಾರ ಮಾಡಿ | ಮತ್ತೆ ಧಾರುಣಿಯೊಳು
ಬಂದರು ನಾರಾಯಣನೇ ಸರ್ವೋತ್ತಮನುಯೆಂದು ಸಾರಿದರು |
ಹೀಗೆಂದು ತಿಳಿಯಲು| ಮಾರಜನಕ ವಿಜಯವಿಠಲ ಆರಾಗಿದರು
ಒಲಿವ ಕಾಣಿರೋ--- ಬೇಸರದೆ ಭಜಿಸಿರೋ
ಪುರಂದರದಾಸರಾಯರ ----

ಇಂಥಾ ಹರಿದಾಸ ಶ್ರೇಷ್ಠರಾದ ಸದ್ಭಕ್ತಿ ಜ್ಞಾನವೈರಾಗ್ಯದಿ ಸದ್ಗುಣಗಳ ಖಣಿಯಾದ ಪುರಂದರದಾಸರಾಯರ ವಿಚಾರ ಹೇಳುವುದೇ ನಮ್ಮ ಸೌಭಾಗ್ಯ ದಾಸರೆಂದರೆ ಪುರಂದರ ದಾಸರಯ್ಯ ಎಂದು ಕೊಂಡಾಡುವುದು ನಮ್ಮ ಆದ್ಯ ಕರ್ತವ್ಯ---

 

Source: Vani Vadiraja
Photo : Purandara Mantapa at Hampi
 

Posted in: