ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯದಿಂದ ನಡೆದ ೪ ಹಂತಗಳ ಪಾದಯಾತ್ರೆಯ ಕೊನೆಯ ಹಂತ ಅಭೂತಪೂರ್ವವಾಗಿ ಕೊನೆಗೊಂಡಿತು. ಮೊದಲ ಹಂತದಲ್ಲಿ ೩೦೦ ಜನ ೨ನೇ ಹಂತದಲ್ಲಿ ೫೦೦ ೩ನೇ ಹಂತದಲ್ಲಿ ೮೦೦ ಹೀಗೆ ಪ್ರತಿ ಹಂತದಲ್ಲಿ ಬೆಳೆಯುತ್ತಾ ಪಾದಯಾತ್ರಿಗಳ ಸಂಖ್ಯೆ ೪ನೇಹಂತದಲ್ಲಿ ತಲುಪಿದ್ದು ೧೩೦೦. ಶ್ರೀ ಮನ್ಮಾಧವತೀರ್ಥರ ಮೂಲ ಮಹಾ ಸಂಸ್ಥಾನ ತಂಬಿಹಳ್ಳಿ ಮಠದ ಅಧುನಾ ಪೀಠಾಧಿಪತಿಗಳಾದ ಶ್ರೀ ವಿದ್ಯಾಸಾಗರ ಮಾಧವ ತೀರ್ಥರು ಮಾನ್ವಿಯ ಶ್ರೀ ಜಗನ್ನಾಥದಾಸರ ಮಂದಿರದಲ್ಲಿ ಜ್ಯೋತಿ ಬೆಳಗಿಸಿ ನಗರದ ಕೋರ್ಟ್ ಆಂಜನೇಯ ದೇವಸ್ಥಾನದವರೆಗೆ ನಡೆಯುವುದರ ಮೂಲಕ ಉದ್ಘಾಟಿಸಿದರು.